ಕ್ರೀಡೆಯಲ್ಲಿ ಭಾಗವಹಿಸಿದಾಗ ಮಾತ್ರ ರೋಗಗಳಿಂದ ದೂರವಿರಲು ಸಾಧ್ಯ: ಸಚಿವ ಈಶ್ವರಪ್ಪ - Sahyadri College Stadium
ಶಿವಮೊಗ್ಗ: ಕ್ರೀಡೆಯಲ್ಲಿ ಭಾಗವಹಿಸಿದಾಗ ಮಾತ್ರ ರೋಗಗಳಿಂದ ದೂರವಿರಲು ಸಾಧ್ಯ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದ ಸಹ್ಯಾದ್ರಿ ಕಾಲೇಜಿನ ಒಳ ಕ್ರೀಡಾಂಗಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಹ್ಯಾದ್ರಿ ಕಾಲೇಜು ನಮ್ಮ ಹೆಮ್ಮೆ. ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಹಾಗೂ ಕ್ರೀಡಾ ವಿಭಾಗದವರಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಕಡಿಮೆ ಇದೆ ಎಂದೆನಿಸುತ್ತದೆ. ಯಾಕೆಂದರೆ ಇಲ್ಲಿವರೆಗೂ ಸಹ ನಮಗೆ ಕ್ರೀಡೆಗೆ ಅನುದಾನ ಬೇಕು ಎಂದು ಕೇಳಿಲ್ಲ. 10 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕ್ರೀಡಾಂಗಣ ಇಂದು ಅಸ್ಥಿಪಂಜರದಂತೆ ಕಾಣುತ್ತಿದೆ. ಹಾಗಾಗಿ ಒಳಾಂಗಣ ಕ್ರೀಡಾಂಗಣದ ಜೊತೆಗಿರುವ ಕ್ರೀಡಾಂಗಣದ ನಿರ್ಮಾಣ ಕಾರ್ಯವು ಆರಂಭವಾಗಬೇಕು.ಇದರ ಜೊತೆಗೆ ಎನ್ಎಸ್ಎಸ್ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಐದು ಕೋಟಿ ರೂಪಾಯಿ ಅನುದಾನವನ್ನು ಕೊಡಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.