ಕರ್ನಾಟಕದ ಒಂದಿಂಚು ಭೂಮಿ ಸಹ ಮಹಾರಾಷ್ಟ್ರಕ್ಕೆ ಹೋಗಲ್ಲ: ಸಚಿವ ಕೆ.ಎಸ್ ಈಶ್ವರಪ್ಪ - ಸಚಿವ ಕೆಎಸ್ ಈಶ್ವರಪ್ಪ,
ಬೆಳಗಾವಿ ಗಡಿಯ ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಬದ್ಧವಾಗಿದೆ ಎಂಬ ಉದ್ಧವ್ ಠಾಕ್ರೆ ಹೇಳಿಕೆ ಕುರಿತು ಶಿವಮೊಗ್ಗದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಕರ್ನಾಟಕದ ಒಂದಿಂಚೂ ಭೂಮಿಯನ್ನು ಮಹಾರಾಷ್ಟ್ರಕ್ಕೆ ಹೋಗಲ್ಲ. ಕರ್ನಾಟಕ ರಾಜ್ಯದವರು ಸಹ ಮಹಾರಾಷ್ಟ್ರದ ಹಲವು ಭಾಗದಲ್ಲಿದ್ದಾರೆ. ಹಾಗಂತ ಮಹಾರಾಷ್ಟ್ರದ ಎಲ್ಲ ಭೂಮಿಯನ್ನು ಕರ್ನಾಟಕಕ್ಕೆ ಜೋಡಿಸಿಕೊಳ್ಳಲು ಆಗುತ್ತೆ ಎಂದರು. ಮಹಾರಾಷ್ಟ್ರ ಕರ್ನಾಟಕ, ಕರ್ನಾಟಕ ತಮಿಳುನಾಡು, ಕರ್ನಾಟಕ ಆಂದ್ರಪ್ರದೇಶದವರೆಲ್ಲ ಅಣ್ಣ ತಮ್ಮಂದಿರ ಥರ ಬಾಳುತಿದ್ದೇವೆ. ಭೂಮಿ, ನೀರು ವಿಚಾರದಲ್ಲಿ ಕ್ಯಾತೆ ತೆಗೆಯುವ ಅಭಿಪ್ರಾಯ ಮಹಾರಾಷ್ಟ್ರದ ಕೆಲವು ವ್ಯಕ್ತಿಗಳು ಹಾಗೂ ಕೆಲವು ಪಕ್ಷಗಳು ಕ್ಯಾತೆ ತೆಗೆದರೆ ಮರಾಠಿಗರು ನಮಗೆ ಬೆಂಬಲ ನೀಡುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಹಾಗಾಗಿ ಕ್ಯಾತೆ ತೆಗೆಯುತ್ತಾರೆ ಎಂದರು.