ನನಗೆ ಬಹಳ ಜನ ನೀರು ಕುಡಿಸಿದ್ದಾರೆ ಬಿಡಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ - Poojary Comedy
ಶಿವಮೊಗ್ಗ: ಜಿಲ್ಲಾ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡುವಾಗ ಕೆಮ್ಮಿದರು. ಈ ವೇಳೆ ಪಕ್ಕದಲ್ಲೇ ಇದ್ದ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ ನೀರು ನೀಡಲು ಹೋದಾಗ, ಸಚಿವರು ನನಗೆ ಬಹಳ ಜನ ನೀರು ಕುಡಿಸಿದ್ದಾರೆ ಎಂದು ಕಾಮಿಡಿ ಮಾಡಿದರು. ಈ ನಡುವೆ ಸಿ.ಟಿ.ರವಿ ಎದ್ದು, ಪೂಜಾರಿಗೆ ಮುಜರಾಯಿ ಜೊತೆ ಮೀನುಗಾರಿಕೆ ಇದೆ. ಅಷ್ಟೇ ಅಲ್ಲ ಮುಂದೆ ಹೇಳೋಣವೇ ಎಂದರು. ಇದಕ್ಕೆ ಪ್ರತಿಕ್ರಿಸಿದ ಪೂಜಾರಿ, ಅಯ್ಯೋ ಬೇಡಪ್ಪ, ನಾವಿಬ್ಬರು ಕಾಂಪ್ರಮೈಸ್ ಮಾಡಿಕೊಳ್ಳೋಣ. ನನಗೆ ಇಲ್ಲಾದ್ರೂ ಬಿಡಿ ಎಂದರು.