ಕರ್ನಾಟಕ

karnataka

ETV Bharat / videos

ಚಂಡಿಕಾಹೋಮ,ರುದ್ರಹೋಮ ನಡೆಸಿದ ಸಚಿವ ಕೆ ಎಸ್ ಈಶ್ವರಪ್ಪ - ks ishwarappa conducted rudrahoma news

By

Published : Nov 17, 2019, 7:58 PM IST

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಇಂದು ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ತಮ್ಮ ಜಯಲಕ್ಷ್ಮಿ ನಿವಾಸದಲ್ಲಿ ಚಂಡಿಕಾ ಹೋಮ ನಡೆಸಿದರು. ಈಶ್ವರಪ್ಪ ತಮ್ಮ ನಿವಾಸದಲ್ಲಿ ಪ್ರತಿ ವರ್ಷ ಹೋಮ ನಡೆಸುವ ಪದ್ಧತಿಯನ್ನು ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಸಚಿವರು ತಮ್ಮ ನಿವಾಸದ ಸಮೀಪವಿರುವ ಮಲ್ಲೇಶ್ವರ ದೇವಸ್ಥಾನದಿಂದ ಮಲ್ಲೇಶ್ವರಸ್ವಾಮಿ, ಚೌಡೇಶ್ವರಿ ದೇವಿ ಮೂರ್ತಿ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ರು. ಈಶ್ವರಪ್ಪನವರ ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್, ಸೊಸೆ ಶಾಲಿನಿ, ಮಕ್ಕಳು ಹಾಗೂ‌ ಮೊಮ್ಮಕ್ಕಳು ಪೂಜಾಕಾರ್ಯದಲ್ಲಿ ಭಾಗಿಯಾಗಿದ್ದರು.

ABOUT THE AUTHOR

...view details