ಕರ್ನಾಟಕ

karnataka

ETV Bharat / videos

ಹಾಸನ ಜಿಲ್ಲೆಯ ಜನರ ಕನಸಿಗೆ ಜೀವ : ಐಐಟಿ ಪ್ರದೇಶ ಪರಿಶೀಲನೆ ಮಾಡಿದ ಜಗದೀಶ್​ ಶೆಟ್ಟರ್​​​ - ಹಾಸನ ಐಐಟಿ ಪ್ರದೇಶ

By

Published : Jul 2, 2020, 11:17 PM IST

ಹಾಸನ ಜಿಲ್ಲೆಗೆ ಐಐಟಿ ತರಬೇಕು ಎಂಬುದು ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಮಹತ್ವಾಕಾಂಕ್ಷೆಯಾಗಿತ್ತು. ಅದಕ್ಕಾಗಿ 20 ವರ್ಷಗಳ ಹಿಂದೆಯೇ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರಿಗೆ ಹಣವನ್ನು ನೀಡಲಾಗಿತ್ತು. ಆದರೆ ಐಐಟಿ ಸ್ಥಾಪನೆಗೆ ಸರ್ಕಾರ ಮಾತ್ರ ಹಣ ಬಿಡುಗಡೆ ಮಾಡಿಲ್ಲ. ಕಳೆದ ಬಾರಿಯೇ ಕೇಂದ್ರದಿಂದ ಐಐಟಿ ಸ್ಥಾಪನೆಯ ಘೋಷಣೆ ಮಾಡಿತ್ತು ಆದರೆ ಅದು ಉತ್ತರ ಕರ್ನಾಟಕದ ಪಾಲಾಗಿದ್ದು ಜಿಲ್ಲೆಯ ಜನರಿಗೆ ನಿರಾಸೆ ಉಂಟಾಗಿತ್ತು. ದೋಸ್ತಿ ಸರ್ಕಾರದಲ್ಲಿ ಈ ಕುರಿತು ಕೇಂದ್ರಕ್ಕೆ ಒತ್ತಡ ಹೇರಿ ಹಲವು ಪತ್ರಗಳನ್ನು ಬರೆದರೂ ಕೂಡಾ ಅದು ಫಲಕಾರಿಯಾಗಿರಲಿಲ್ಲ. ಆದರೆ ಸದ್ಯ ರಾಜ್ಯ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಸನಕ್ಕೆ ಭೇಟಿ ನೀಡಿ, ಐಐಟಿ ಪ್ರದೇಶವನ್ನು ಪರಿಶೀಲನೆ ಮಾಡುತ್ತಿರುವುದು ಜಿಲ್ಲೆಯ ಜನರ ಕನಸು ನನಸಾಗುವ ಆಸೆಗೆ ಜೀವ ಬಂದಂತಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ, ಜೆಡಿಎಸ್ ಮಾಧ್ಯಮ ವಕ್ತಾರ ರಘು ಹೊಂಗೆರೆ ಯವರೊಂದಿಗೆ ನಡೆಸಿರುವ ಸಂದರ್ಶನ ಇಲ್ಲಿದೆ ನೋಡಿ.

ABOUT THE AUTHOR

...view details