ಶಿವಮೊಗ್ಗದಲ್ಲಿ ಜನರಿಗೆ ಕಲ್ಲಂಗಡಿ ಹಂಚಿದ ಸಚಿವ ಈಶ್ವರಪ್ಪ, ಪುತ್ರ ಕಾಂತೇಶ್ - ಶಿವಮೊಗ್ಗದಲ್ಲಿ ಕೊರೊನಾ ಎಫೆಕ್ಟ್
ಶಿವಮೊಗ್ಗ: ಕೊರೊನಾ ಮಹಾಮಾರಿಯಿಂದ ಹಣ್ಣು ಬೆಳೆದ ರೈತರು ಮಾರುಕಟ್ಟೆ ದೂರೆಯದೆ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದನ್ನು ಅರಿತ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್, ರೈತರ ಬಳಿ ಹಣ್ಣು ಖರೀದಿಸಿ ಸಾಂಕೇತಿಕವಾಗಿ ಹಂಚುವ ಮೂಲಕ ಚಾಲನೆ ನೀಡಿದರು. ಈ ಕುರಿತು ಅವರು ಈಟಿವಿ ಭಾರತನೊಂದಿಗೆ ಮಾತನಾಡಿದ್ದಾರೆ.