ಅರ್ಧ ಗಂಟೆ ಕಾಲ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ಬಳಿ ನಿಂತು ನಮಸ್ಕರಿಸಿದ ಸಚಿವ ಸಿಸಿ ಪಾಟೀಲ್ - ಸಿಸಿ ಪಾಟೀಲ್
ತುಮಕೂರು: ಇಲ್ಲಿನ ಸಿದ್ಧಗಂಗಾ ಮಠಕ್ಕೆ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಸಿಸಿ ಪಾಟೀಲ್ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದರು. ಸುಮಾರು ಅರ್ಧಗಂಟೆ ಕಾಲ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಬಳಿ ನಿಂತು ನಮಸ್ಕರಿಸಿದ ಅವರು ವಿಶೇಷ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು. ಬಳಿಕ ಮಠದಲ್ಲಿದ್ದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಈ ವೇಳೆ ಉತ್ತರಕರ್ನಾಟಕ ಭಾಗದಲ್ಲಿನ ನೆರೆ ಪ್ರವಾಹ ಪರಿಸ್ಥಿತಿ ಕುರಿತು ಸ್ವಾಮೀಜಿಗೆ ಮಾಹಿತಿ ನೀಡಿದರು. ಅಲ್ಲದೆ ಸರ್ಕಾರದ ವತಿಯಿಂದ ತೆಗೆದುಕೊಂಡಿರುವ ಪರಿಹಾರ ಕಾಮಗಾರಿಗಳ ಕುರಿತು ವಿವರಿಸಿದರು.