ಅಲೆಮಾರಿ ಕುಟುಂಬದ ಸಮಸ್ಯೆಗೆ ಸ್ಪಂದಿಸಿದ ಸಚಿವ ಬಿ.ಸಿ. ಪಾಟೀಲ್ - ಅಲೆಮಾರಿ ಕುಟುಂಬದ ಜನರ ಸಮಸ್ಯೆಗೆ ಸ್ಪಂದಿಸಿದ ಸಚಿವ ಬಿ.ಸಿ.ಪಾಟೀಲ್
ಹಾವೇರಿ: ಲಾಕ್ಡೌನ್ನಿಂದಾಗಿ ಕುಡಿಯೋಕೆ ನೀರು, ಊಟಕ್ಕೆ ಅನ್ನವಿಲ್ಲದೆ ಪರದಾಡ್ತಿದ್ದ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಹೊರವಲಯದಲ್ಲಿರೋ ಅಲೆಮಾರಿ ಕುಟುಂಬದ ಜನರ ಸಮಸ್ಯೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಂದಿಸಿದ್ದಾರೆ. ಊಟಕ್ಕೆ ಅನ್ನ ಕೊಡಿ. ಇಲ್ಲದಿದ್ರೆ ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳ ಹೆಸರು ಬರೆದಿಟ್ಟು ಸಾಮೂಹಿಕವಾಗಿ ಸಾಯ್ತೀವಿ ಎಂದು ಅಲೆಮಾರಿಗಳು ತಮ್ಮ ಅಳಲು ತೋಡಿಕೊಂಡಿದ್ದರು. ಇದನ್ನ ಗಮನಿಸಿದ ಸಚಿವ ಪಾಟೀಲ್ ಅಧಿಕಾರಿಗಳ ಜೊತೆ ಅಲೆಮಾರಿ ಕುಟುಂಬಗಳನ್ನ ಭೇಟಿ ಮಾಡಿ ಸರ್ಕಾರದಿಂದ ಅವರಿಗೆ ಪಡಿತರ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ತಾತ್ಕಾಲಿಕವಾಗಿ ಸೂರು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಂತರ ಅಲೆಮಾರಿಗಳಿಗೆ ಶಾಶ್ವತ ಸೂರು ಕಲ್ಪಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ.