ಅಭಿಮಾನಿ ಆಸೆಯಂತೆ ದರ್ಗಾದಲ್ಲಿ ತುಲಾಭಾರ ಹರಕೆ ತೀರಿಸಿದ ಬಿ.ಸಿ.ಪಾಟೀಲ್ - ಬಿಸಿ ಪಟೀಲ್ ಅಭಿಮಾನಿ
ಹಾವೇರಿ: ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‌ಗೆ ಸಚಿವ ಸ್ಥಾನ ಸಿಕ್ಕರೆ ಅವರಷ್ಟೇ ತೂಕದ ಸಕ್ಕರೆ ತುಲಾಭಾರ ನೀಡುವುದಾಗಿ ಅವರ ಅಭಿಮಾನಿ ಹರಕೆ ಕಟ್ಟಿದ್ದ. ಹಂಸಭಾವಿಯ ಮುಸ್ತಫಾ ಪ್ಯಾಟಿ ಸಮೀಪದ ಉಸ್ಮಾನ್ ಚಾವಲಿ ದರ್ಗಾದಲ್ಲಿ ಹರಕೆ ಕಟ್ಟಿಕೊಂಡಿದ್ದ. ಇದೀಗ ಬಿ.ಸಿ.ಪಾಟೀಲ್‌ಗೆ ಸಚಿವ ಸ್ಥಾನ ದೊರಕ್ಕಿದ್ದು, ಹರಕೆ ತೀರಿಸಿದ್ದಾರೆ. ಈ ಹಿನ್ನೆಲೆ ಕೃಷಿ ಸಚಿವ ಬಿ.ಸಿ.ಪಾಟೀಲ್ ತುಲಾಭಾರಕ್ಕಾಗಿ ಆಗಮಿಸಿದ್ದರು. ಬಳಿಕ ಮನೆಯಲ್ಲಿ ತುಲಾಭಾರ ಸೇವೆ ನೆರವೇರಿಸಲಾಯಿತು.
Last Updated : Feb 27, 2021, 6:17 AM IST