ಧರ್ಮೇಗೌಡರ ಆತ್ಮಹತ್ಯೆ ನೋವು ತಂದಿದೆ : ಸಚಿವ ಬೈರತಿ ಬಸವರಾಜ್ - ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ ಸಾವಿಗೆ ಸಚಿವರ ಸಂತಾಪ
ವಿಧಾನ ಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ ತುಂಬ ನೋವು ತರಿಸಿದೆ ಎಂದು ಶಿವಮೊಗ್ಗದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ. ಶಾಸಕರಾಗಿ, ಉಪ ಸಭಾಪತಿ ಆಗಿ ಧರ್ಮೇಗೌಡ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದರು. ಬಹಳ ವರ್ಷದಿಂದ ರಾಜಕೀಯದಲ್ಲಿದ್ದವರು ಅವರು. ಇಂತಹ ನಿರ್ಧಾರ ಏಕೆ ಕೈಗೊಂಡರು ಎಂದು ಗೊತ್ತಾಗುತ್ತಿಲ್ಲ. ಅವರ ಆತ್ಮಹತ್ಯೆ ಬಹಳ ನೋವು ತರಿಸಿದೆ, ಜನಪ್ರತಿನಿಧಿಯಾಗಿ ಇಂತಹ ನಿರ್ಧಾರ ಕೈಗೊಳ್ಳಬಾರದಿತ್ತು ಎಂದು ದುಃಖ ವ್ಯಕ್ತಪಡಿಸಿದರು. ಇದೇ ವೇಳೆ ಇಂದು ನಡೆಯಬೇಕಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಹೇಳಿದ್ರು.