ನೈಟ್ ಕರ್ಫ್ಯೂನಿಂದ ಪ್ರವಾಸೋದ್ಯಮಕ್ಕೆ ತೊಂದರೆ.. ಆದರೆ, ಸುರಕ್ಷತೆಯೂ ಮುಖ್ಯ : ಸಚಿವ ಆನಂದ್ ಸಿಂಗ್ - ನೈಟ್ ಕರ್ಫ್ಯೂ ಕುರಿತು ಸಚಿವ ಆನಂದ್ ಸಿಂಗ್ ಹೇಳಿಕೆ
ನೈಟ್ ಕರ್ಫ್ಯೂ ಕುರಿತಂತೆ ಸಚಿವ ಆನಂದ್ ಸಿಂಗ್ ಹಾಸ್ಯ ಚಟಾಕಿ ಹಾರಿಸಿದರು. ಕೊಪ್ಪಳ ತಾಲೂಕಿನ ಮುನಿರಾಬಾದ್‌ನ ಕಾಡಾ ಕಚೇರಿಯಲ್ಲಿ ನಡೆದ ಐಸಿಸಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಏನು ನೈಟ್ ಕರ್ಫ್ಯೂ? ಇಡೀ ರಾಜ್ಯಕ್ಕಾ ಎಂದು ಸಚಿವ ಆನಂದ್ ಸಿಂಗ್ ಪತ್ರಕರ್ತರನ್ನು ಪ್ರಶ್ನಿಸಿದರು. ನಾವು ನೈಟ್ ಹೊರಗೆ ಹೋಗಂಗಿಲ್ಲ, ನಮಗೆ ಗೊತ್ತಿಲ್ಲ. ನೀವು ಹೋಗುವವರು. ಹೀಗಾಗಿ, ನಿಮಗೆ ಆತಂಕವಿರಬೇಕು. ನಾವು 8 ಗಂಟೆಗೆ ಹೋಗಿ ಊಟ ಮಾಡಿ ಮಲಗುವವರು. ನೈಟ್ ಕರ್ಫ್ಯ್‌ನಿಂದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲಿದೆ. ಆದರೆ, ಜೀವ ಮುಖ್ಯ. ಹೀಗಾಗಿ, ಮುಂಜಾಗ್ರತೆ ತೆಗೆದುಕೊಳ್ಳಲಾಗಿದೆ. ಮುಂಜಾಗ್ರತೆ ತೆಗೆದುಕೊಳ್ಳದಿದ್ದರೆ ನಿರ್ಲಕ್ಷ್ಯ ಎನ್ನಲಾಗುತ್ತಿದೆ. ಅಕಸ್ಮಾತ್ ಅನಾಹುತವಾದರೆ ನಿರ್ಲಕ್ಷ್ಯ ವಹಿಸಲಾಗಿದೆ ಎನ್ನುತ್ತಿದ್ದರು. ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತದೆಯಾದರೂ ಸಹ, ಜನರ ಜೀವಕ್ಕಾಗಿ, ಆರೋಗ್ಯಕ್ಕಾಗಿ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ ಎಂದು ಸಮರ್ಥಿಸಿಕೊಂಡರು.
Last Updated : Dec 28, 2021, 7:47 PM IST