ವಿಜಯನಗರದ ಮಣ್ಣಿಗೆ ಮುತ್ತಿಟ್ಟ ಸಚಿವ ಆನಂದ್ ಸಿಂಗ್ : ಭರ್ಜರಿ ವಿಜಯೋತ್ಸವ - ವಿಜಯನಗರದ ಮಣ್ಣಿಗೆ ನಮಸ್ಕರಿಸಿದ ಸಚಿವ ಆನಂದ್ ಸಿಂಗ್
ಹೊಸಪೇಟೆ : ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆ ಬಳಿಕ ನಗರಕ್ಕೆ ಬಂದ ಸಚಿವ ಆನಂದ ಸಿಂಗ್ ನೆಲಕ್ಕೆ ಮುತ್ತಿಟ್ಟರು. ಸಚಿವ ಆನಂದ ಸಿಂಗ್ ಆಗಮಿಸುತ್ತಿದ್ದಂತೆ ಬೆಂಬಲಿಗರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಬೆಂಬಲಿಗರು ಸಚಿವರಿಗೆ ಹೂವಿನ ಹಾರ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದರು. ನಂತರ ತಂದೆ ಪೃಥ್ವಿರಾಜ್ ಸಿಂಗ್ ಅವರಿಗೆ ಸಚಿವ ಆನಂದ ಸಿಂಗ್ ಹೂವಿನ ಹಾರ ಹಾಕಿ ಆಲಂಗಿಸಿದರು. ಬಳಿಕ ತಮ್ಮ ಸ್ಕಾರ್ಪಿಯೋ ಕಾರು ಮುಂಭಾಗ ಕುಳಿತುಕೊಂಡು ವಿಜಯನಗರದ ಧ್ವಜವನ್ನು ಹಾರಿಸುವ ಮೂಲಕ ನಗರದಲ್ಲಿ ಭರ್ಜರಿ ವಿಜಯೋತ್ಸವ ಆಚರಿಸಿದರು.