ನಿತ್ಯೋತ್ಸವ ಕವಿ ಅಂತ್ಯಕ್ರಿಯೆ ವೇಳೆ ಸರ್ಕಾರದಿಂದ ಅಗೌರವ.. ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ - nisar ahmed death latest news
ನಿತ್ಯೋತ್ಸವ ಕವಿ ಪ್ರೊ.ಕೆ ಎಸ್ ನಿಸಾರ್ ಅಹಮದ್ ಅಂತ್ಯಕ್ರಿಯೆಗೆ ಪಾಲ್ಗೊಳ್ಳದೆ ಸರ್ಕಾರ ಅಗೌರವ ತೋರಿದೆ. ಹಿರಿಯ ಕವಿಗೆ ಸರ್ಕಾರಿ ಗೌರವ ಸಲ್ಲಿಸುವ ವೇಳೆ ರಾಜ್ಯ ಸರ್ಕಾರದ ಯಾವೊಬ್ಬ ಮಂತ್ರಿಯಾಗಲಿ, ಪ್ರತಿನಿಧಿಯಾಗಲಿ ಆಗಮಿಸಿರಲಿಲ್ಲ. ನಾಡಿನ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ ಕವಿಗೆ ಅಗೌರವ ತೋರಲಾಗಿದೆ ಅಂತಾ ಎಂದು ನಿಸಾರ್ ಅಹಮದ್ ಅಭಿಮಾನಿಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕಾಟಾಚಾರಕ್ಕೆ ಸರ್ಕಾರಿ ಗೌರವ ಸಲ್ಲಿಸಬಾರದು ಎಂದು ಕಿಡಿ ಕಾರಿದರು.