ಉಳ್ಳಾಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಿನಿ ಟೆಂಪೋ ಪಲ್ಟಿ: ವಿಡಿಯೋ
ಉಳ್ಳಾಲ: ಮಿನಿ ಟೆಂಪೋ ವಾಹನವೊಂದು ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಪಲ್ಟಿಯಾಗಿರುವ ಘಟನೆ ಬುಧವಾರ ನಡೆದಿದೆ. ವಾಣಿಜ್ಯ ಮಳಿಗೆಯೊಂದರ ಅವೈಜ್ಞಾನಿಕ ಪಾರ್ಕಿಂಗ್ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗ್ತಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮಿನಿ ಟೆಂಪೋಗೆ ಲಾರಿ ಅಡ್ಡ ಬಂದ ಪರಿಣಾಮ ಘಟನೆ ಸಂಭವಿಸಿದೆ ಎನ್ನಲಾಗಿದೆ.