ಒಂದು ಕೆ.ಜಿ ನವಣೆಯಲ್ಲಿ ಎಷ್ಟು ಕಾಳುಗಳಿವೆ ಗೊತ್ತೇ? 87 ಗಂಟೆ 35 ನಿಮಿಷದಲ್ಲಿ ಎಣಿಕೆ ಮುಗಿಸಿದ ಶಿವಮೊಗ್ಗದ ವಿದ್ಯಾರ್ಥಿ! - ನವಣೆ ಕಾಳು ಎಣಿಸಿ ಇಂಡಿಯಾ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆ
ಒಂದು ಕೆ.ಜಿ ನವಣೆ ಕಾಳಿನಲ್ಲಿ ಎಷ್ಟು ಕಾಳುಗಳಿವೆ ಅಂತಾ ನಿಮ್ಗೇನಾದ್ರು ಗೊತ್ತಾ? ಯಾವತ್ತಾದ್ರೂ ಎಣಿಸೋ ಸಾಹಸಕ್ಕೇನಾದ್ರು ಕೈ ಹಾಕಿದ್ದೀರಾ?. ಇಲ್ಲಾ ಅಂದ್ರೆ ಇಲ್ಲಿದೆ ಇಂಟರೆಸ್ಟಿಂಗ್ ಸುದ್ದಿ. ಒಂದು ಕೆ.ಜಿ ನವಣೆಯಲ್ಲಿ 4,04,882 ಕಾಳುಗಳಿವೆ ಅಂತ ಅದನ್ನು ಎಣಿಸಿ ಸಾಧನೆಗೈದ ವಿದ್ಯಾರ್ಥಿ ಹೇಳಿದ್ದಾನೆ. ಈ ಸಾಧನೆಯಿಂದ ಇಂಡಿಯಾ ವರ್ಲ್ಡ್ ರೆಕಾರ್ಡ್ ಸೇರಿದ್ದಾನೆ.