ಬೇವಿನ ಮರದಲ್ಲಿ ಉಕ್ಕುತಿದೆ ಹಾಲು.. ವಿಸ್ಮಯ ನೋಡಲು ಹರಿದು ಬರುತ್ತಿದೆ ಜನಸಾಗರ
ಚಿಕ್ಕಬಳ್ಳಾಪುರ: ಬೇವಿನ ಮರದಲ್ಲಿ ಹಾಲು ಬರುವ ಮೂಲಕ ಜನತೆಗೆ ಅಚ್ಚರಿ ಮೂಡಿಸಿದ ಘಟನೆ ತಾಲೂಕಿನ ರಾಮಗಾನಪರ್ತಿಯಲ್ಲಿ ಬೆಳಕಿಗೆ ಬಂದಿದೆ. ಗ್ರಾಮದಿಂದ ಕೆರೆಗೆ ಹೋಗುವ ದಾರಿ ಪಕ್ಕದಲ್ಲಿರುವ ಬೇವಿನ ಮರದಲ್ಲಿ ಹಾಲು ಬರುವುದನ್ನು ಗಮನಿಸಿದ ಸ್ಥಳೀಯರು ನಿಬ್ಬೆರಗಾಗಿದ್ದಾರೆ. ಮಾಹಿತಿಯನ್ನು ತಿಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದು, ಭಕ್ತಿಯಿಂದ ನಮಿಸಿ, ಪೂಜೆ ಮಾಡಲು ಮುಂದಾಗುತ್ತಿದ್ದಾರೆ. ಸದ್ಯ ಬೇವಿನ ಮರದ ವಿಸ್ಮಯ ನೋಡಲು ಜನರ ದಂಡೇ ಹರಿದು ಬರುತ್ತಿದೆ. ವೈಜ್ಞಾನಿಕವಾಗಿ ಮಣ್ಣಿನಲ್ಲಿ ಆಗುವ ಬದಲಾವಣೆಗಳಿಂದ ಅಥವಾ ಮರ, ರೋಗಗಳಿಂದ ರಕ್ಷಿಸಿಕೊಳ್ಳಲು ಫ್ಲ್ಯುಯಿಡ್ ಬಿಡುಗಡೆ ಮಾಡುತ್ತದೆ ಎಂದು ಪರಿಸರವಾದಿಗಳು ತಿಳಿಸಿದ್ದಾರೆ.