ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಬೆಂಬಲಿಗರಿಂದ ಕ್ಷೀರಾಭಿಷೇಕ - Milk anointing in Haveri district
ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕೋಣನಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ ತಾಂಡಾದಲ್ಲಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಶಿವಪುರ ತಾಂಡಾದ ಸುಧೀರ್ ಲಮಾಣಿಗೆ ಹಾಲಿನ ಅಭಿಷೇಕ ಮಾಡಲಾಗಿದ್ದು, ಬಣ್ಣ ಎರಚಿ ಕೇಕೆ ಹಾಕಿ ವಿಜಯೋತ್ಸವ ಆಚರಿಸಿದ್ದಾರೆ.