ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ.. ಕಡಲಿಗಿಳಿಯದಂತೆ ಮುನ್ನೆಚ್ಚರಿಕೆ.. - ಹವಾಮಾನ ಇಲಾಖೆ ಮಂಗಳೂರು ಸುದ್ದಿ
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಪರಿಣಾಮ ಅದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಪ್ರಭಾವದಿಂದಾಗಿ ಕಡಲು ತೀರಾ ಪ್ರಕ್ಷುಬ್ಧಗೊಂಡಿದೆ. ಅಲ್ಲದೆ ಸಮುದ್ರದ ಮೊರೆತವೂ ಅಧಿಕವಾಗಿದೆ. ಆದ್ದರಿಂದ ಜನ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದ್ದು, ಯಾರೂ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.