ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ... ವ್ಯಾಪಾರಸ್ಥರಿಂದ ಹಗಲು ದರೋಡೆ - ಕೊರೊನಾ ಹಿನ್ನಲೆ ದೇಶವೇ ಲಾಕ್ ಡೌನ್
ಯಶವಂತಪುರದ ಗೊಲ್ಲಹಳ್ಳಿಯಲ್ಲಿ 80 ರೂಪಾಯಿ ಅಡುಗೆ ಎಣ್ಣೆಗೆ 110, ಹಾಗೂ 36 ರೂ. ಸಕ್ಕರೆಗೆ 55, ಹೀಗೆ ಮನಸ್ಸಿಗೆ ಬಂದ ದರ ಹೇಳಿ ಮಾರ್ತಿರೋ ವ್ಯಾಪಾರಸ್ಥರು ಜನರ ಜೇಬಿಗೆ ಕತ್ತರಿ ಹಾಕ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ, ಹಣ್ಣು ತರಕಾರಿಗಳನ್ನು ಸಹ ವ್ಯಾಪಾರಿಗಳು ದುಪ್ಪಟ್ಟು ದರಕ್ಕೆ ಮಾರುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇಲ್ಲಿ ಸರ್ಕಾರದ ಸೂಚನೆ ಲೆಕ್ಕಕ್ಕಿಲ್ಲ ಎಂಬಂತಾಗಿದೆ.