ಹಾವೇರಿಯಲ್ಲಿ ಲಾಕ್ ಡೌನ್ ಆದೇಶ ಪಾಲಿಸದ ವ್ಯಾಪಾರಿಗಳು: ಪೊಲೀಸರಿಂದ ಲಾಠಿ ರುಚಿ - Haveri
ಲಾಕ್ ಡೌನ್ ಆದೇಶ ಪಾಲಿಸದ ವ್ಯಾಪಾರಿಗಳನ್ನು ಪೊಲೀಸರು ತೀವ್ರ ತರಾಟೆಗೆ ತಗೆದುಕೊಂಡ ಘಟನೆ ಹಾವೇರಿಯಲ್ಲಿ ನಡೆದಿದೆ. ಲಾಕ್ ಡೌನ್ ನಡುವೆ ಹಾವೇರಿಯಲ್ಲಿ ರಾತ್ರಿಯಾಗುತ್ತಿದ್ದಂತೆ ಕೆಲ ವರ್ತಕರು ವಹಿವಾಟಿಗೆ ಯತ್ನಿಸಿದ್ದರು. ಇದರಿಂದ ಅಸಮಾಧಾನಗೊಂಡ ಪೊಲೀಸ್ ಸಿಬ್ಬಂದಿ ವರ್ತಕರ ದ್ವಿಚಕ್ರ ವಾಹನದ ಗಾಲಿಗಳ ಗಾಳಿ ತೆಗೆದರು. ಮನೆ ಬಿಟ್ಟು ಹೊರಗಡೆ ಓಡಾಡ್ತಿದ್ದವರನ್ನ ತೀವ್ರ ತರಾಟೆಗೆ ತೆಗೆದುಕೊಂಡ ಪೊಲೀಸರು ಮತ್ತೆ ಬರದಂತೆ ತಾಕೀತು ಮಾಡಿದರು. ಸಂಚಾರಿ ಠಾಣೆ ಪಿಎಸ್ಐ ಪಲ್ಲವಿ ನೇತೃತ್ವದಲ್ಲಿ ಅಂಗಡಿಗಳನ್ನ ಬಂದ್ ಮಾಡಿಸಿದ ಪೊಲೀಸರು ಸುಮ್ಮಸುಮ್ಮನೆ ಬೈಕ್ನಲ್ಲಿ ಸಂಚರಿಸುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು.