ಅನ್ನಕ್ಕಾಗಿ ಕಸದ ತೊಟ್ಟಿಯಲ್ಲಿ ಹುಡುಕಾಡಿದ ಮಾನಸಿಕ ಅಸ್ವಸ್ಥ... ವಿಡಿಯೋ ವೈರಲ್ - ಕಸದ ತೊಟ್ಟಿಯಲ್ಲಿ ಆಹಾರಕ್ಕಾಗಿ ಹುಡುಕಾಟ ನಡೆಸಿದ ಮಾನಸಿಕ ಅಸ್ವಸ್ಥ
ಕೊರೊನಾ ಲಾಕ್ಡೌನ್ ಎಫೆಕ್ಟ್ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ತುತ್ತು ಅನ್ನಕ್ಕಾಗಿ ಮಾನಸಿಕ ಅಸ್ವಸ್ಥ ಹುಡುಕಾಟ ನಡೆಸಿದ ಮನಕಲುಕುವ ದೃಶ್ಯ ಕಂಡು ಬಂದಿದೆ. ವಿಜಯಪುರ ನಗರದ ಮನಗೂಳಿ ಅಗಸಿ ರಸ್ತೆಯಲ್ಲಿನ ಕಸದ ತೊಟ್ಟಿಯ ಬಳಿ ಈ ಘಟನೆ ನಡೆದಿದೆ. ಲಾಕ್ಡೌನ್ ಹಿನ್ನೆಲೆ ಎಲ್ಲೂ ಊಟ ಸಿಗದೆ ಅಸ್ವಸ್ಥ ಪರದಾಡಿ ಕೊನೆಗೆ ಕಸದ ತೊಟ್ಟಿಯಲ್ಲಿ ಆಹಾರ ಹುಡುಕುತ್ತಿದ್ದಾನೆ. ಈ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.