ಪ್ರಶ್ನೆ ಏನೇ ಇರಲಿ, ಪಟಾ ಪಟ್ ಉತ್ತರ.. ಕಲಬುರಗಿಯ ಈ ಪೋರನ ಟ್ಯಾಲೆಂಟ್ಗೆ ಜನರು ಫಿದಾ - ಕಲಬುರಗಿಯ ಸಾತ್ವಿಕ್
ಕಲಬುರಗಿ: ನಗರದ ಸಂತೋಷ ಕಾಲೋನಿಯ ನಿವಾಸಿಗಳಾದ ಶಿವಕುಮಾರ್-ಶ್ವೇತಾ ದಂಪತಿಯ ಪುತ್ರ ಸಾತ್ವಿಕ್ ತನ್ನ ತೊದಲು ಭಾಷೆಯಲ್ಲೇ ಎಂಥವರನ್ನೂ ಮುಗ್ಧರನ್ನಾಗಿಸುತ್ತಾನೆ. ಈತನಿಗೆ ಕೇವಲ ಮೂರು ವರ್ಷ. ಆದರೂ ಕೂಡ ರಾಜ್ಯ ರಾಜ್ಯಧಾನಿಗಳ ಹೆಸರು, ಗಾದೆ ಮಾತುಗಳು, ರಾಷ್ಟ್ರ ನಾಯಕರ ಹೆಸರು, ಸ್ವಾತಂತ್ರ್ಯ ಹೋರಾಟಗಾರರ ಹೆಸರು, ರಾಷ್ಟ್ರಪಕ್ಷಿ, ರಾಷ್ಟ್ರಪ್ರಾಣಿ, ರಾಷ್ಟ್ರೀಯ ಕ್ರೀಡೆ ಹೀಗೆ ಹಲವು ಪ್ರಶ್ನೆಗಳಿಗೆ ಅರಳು ಹುರಿದಂತೆ ಉತ್ತರಿಸುತ್ತಾನೆ. ಒಂದೂವರೆ ವರ್ಷದವನಿದ್ದಾಗಿನಿಂದಲೇ ಚುರುಕಿನಿಂದ ಇರೋ ಬಾಲಕನ ವಿಡಿಯೋಗಳನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಕಳುಹಿಸಲಾಗಿದೆ.