ನಾಳೆಯಿಂದ ಮಂಗಳೂರಿನಲ್ಲಿ ಆರಂಭವಾಗಲಿದೆ ಯಾಂತ್ರೀಕೃತ ಮೀನುಗಾರಿಕೆ - ಯಾಂತ್ರೀಕೃತ ಮೀನುಗಾರಿಕೆ
ಐದು ತಿಂಗಳ ನಂತರ ಮಂಗಳೂರಿನಲ್ಲಿ ಯಾಂತ್ರಿಕೃತ ಮೀನುಗಾರಿಕೆ ಆರಂಭವಾಗಲಿದೆ. ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಮೇ ಅಂತ್ಯಕ್ಕೆ ಕೊನೆಗೊಳ್ಳಬೇಕಿದ್ದ ಯಾಂತ್ರಿಕೃತ ಮೀನುಗಾರಿಕೆ ಮಾರ್ಚ್ ಕೊನೆಯ ವಾರದಲ್ಲಿ ಸ್ಥಗಿತವಾಗಿತ್ತು. ಪ್ರತೀ ವರ್ಷದಂತೆ ಆಗಸ್ಟ್ 1ರಂದು ಮೀನುಗಾರಿಕೆ ಆರಂಭವಾಗಿರಲಿಲ್ಲ. ಮೀನುಗಾರರ ನಿರ್ಧಾರ ಮತ್ತು ಸರ್ಕಾರದ ಆದೇಶದಂತೆ ಸೆಪ್ಟೆಂಬರ್ 1ರಿಂದ ಯಾಂತ್ರಿಕೃತ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಅದರಂತೆ ನಾಳೆಯಿಂದ ಯಾಂತ್ರಿಕೃತ ಮೀನುಗಾರಿಕೆ ಆರಂಭವಾಗಲಿದ್ದು, ಮೀನುಗಾರಿಕೆಗೆ ತೆರಳಲು ಬೋಟ್ಗಳು ಸಜ್ಜಾಗಿವೆ.