ಸಾಮಾಜಿಕ ಅಂತರ ಕಾಯ್ದುಕೊಂಡು ಮಟನ್, ಚಿಕನ್ ಖರೀದಿಸಿದ ಕೋಟೆ ನಾಡಿನ ಜನ - chithradurga lockdown
ಚಿತ್ರದುರ್ಗ: ಇಡೀ ದೇಶದಲ್ಲಿ ಕೊರೊನಾ ಅಟ್ಟಹಾಸ ಮೆರೆದಿದೆ. ಇದರ ನಡುವೆ ಚಿತ್ರದುರ್ಗದಲ್ಲಿ ಮಾಂಸ ಪ್ರಿಯರು ಮಟನ್ಗಾಗಿ ಮುಗಿಬಿದ್ದಿದ್ದಾರೆ. ಭಾರತ ಲಾಕ್ಡೌನ್ ಮಾಡಿದರೂ ಕೂಡ ಕೋಟೆನಾಡು ಚಿತ್ರದುರ್ಗದಲ್ಲಿ ಮಾಂಸ ಮಾರಾಟ ಜೋರಾಗಿದೆ. ನಗರದ ಮಟನ್ ಮಾರುಕಟ್ಟೆ ಸೇರಿದಂತೆ ಚಿಕನ್ ಅಂಗಡಿ ಮಾರಾಟದ ಬೀದಿ ಸ್ತಬ್ದವಾಗಿದ್ದವು.ಆದರೆ ಇದೀಗ ಯುಗಾದಿ ಹೊಸ ತಡುಕಿಗಾಗಿ ಮಟನ್ ಖರೀದಿಗೆ ಜನರು ಮುಗಿಬಿದ್ದಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಟನ್ ಖರೀದಿ ಮಾಡಿದ್ದಾರೆ. ಯುಗಾದಿ ಹಬ್ಬದ ಬಳಿಕ ಅಂದ್ರೆ ಮರು ದಿನ ಮಾಂಸಹಾರ ಸೇವನೆ ಮಾಡುವುದು ಸರ್ವೇ ಸಾಮಾನ್ಯ. ಮಟನ್ ಅಂಗಡಿಗಳ ಮುಂದೆ ಮಾರ್ಕ್ ಮಾಡಲಾಗಿದ್ದು, ಕೊರೊನಾ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಜನರು ಮಟನ್ ಖರೀದಿಸುತ್ತಿದ್ದಾರೆ.