ಹಾವೇರಿಯಲ್ಲಿ ವಿಚಾರಣಾಧೀನ ಖೈದಿಗಳಿಂದ ಮಾಸ್ಕ್ ತಯಾರಿಕೆ
ಕೊರೊನಾ ವೈರಸ್ ದೇಶಕ್ಕೆ ಕಾಲಿಟ್ಟ ನಂತರ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಿಸಿತು. ಕೊರೊನಾ ಸೇವೆಗೆ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ವಾರಿಯರ್ಸ್ಗಳಾಗಿ ರಾತ್ರಿ ಹಗಲು ಲೆಕ್ಕಿಸದೆ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಲಾರಂಭಿಸಿದರು. ಈ ಸಿಬ್ಬಂದಿಗೆ ಸಂಘ ಸಂಸ್ಥೆಗಳು ಉಪಹಾರ, ಭೋಜನದ ವ್ಯವಸ್ಥೆ ಮಾಡುವ ಮೂಲಕ ನೆರವಾದರು. ಈ ಎಲ್ಲ ಬೆಳವಣಿಗೆಗಳ ಸುದ್ದಿಗಳನ್ನು ಕೇಳುತ್ತಿದ್ದ ಹಾವೇರಿ ಜಿಲ್ಲಾ ಉಪ ಕಾರಾಗೃಹದ ವಿಚಾರಣಾಧೀನ ಖೈದಿಗಳು ನಾವೆಲ್ಲಾ ಜೈಲಿನಲ್ಲಿದ್ದುಕೊಂಡೇ ಇವರಿಗೆ ಹೇಗೆ ನೆರವಾಗಬಹುದು ಎಂದು ಯೋಚಿಸಿದ್ದಾರೆ. ಈ ವೇಳೆ ಅವರ ತಲೆಗೆ ಹೊಳೆದಿದ್ದು ಮಾಸ್ಕ್ ತಯಾರಿಕೆ. ವಿಚಾರಣಾಧೀನ ಖೈದಿಗಳು ಈ ಬಗ್ಗೆ ಮಾತನಾಡಿದ್ದಾರೆ ನೋಡಿ..