ಧಾರವಾಡ: ಅಂಗನವಾಡಿ ಕಾರ್ಯಕರ್ತೆಯಿಂದ ಮಾಸ್ಕ್ ತಯಾರಿಕೆ - ಕೊರೊನಾ ಸರ್ವೇ ಜೊತೆಗೆ ಮಕ್ಕಳಿಗೆ ಮಾಸ್ಕ್
ಕೊರೊನಾ ಸರ್ವೇ ಜೊತೆಗೆ ಮಕ್ಕಳಿಗೆ ಮಾಸ್ಕ್ ತಯಾರಿಸಿ ಧಾರವಾಡ ಜಿಲ್ಲೆಯ ಅಂಗನವಾಡಿ ಶಿಕ್ಷಕಿ ಮಾನವೀಯತೆಯ ಕೆಲಸ ಮಾಡುತ್ತಿದ್ದಾರೆ. ಮನೆಯ ಸುತ್ತಮುತ್ತಲಿನ ಮನೆಗೆಲಸ ಮಾಡುವ ಜನರ ಮಕ್ಕಳಿಗೆ ಮಾಸ್ಕ್ ತಯಾರಿಸಿ ಹಂಚುತ್ತಿದ್ದು, ಲತಾ ಸುಣಗಾರ ಅವರ ಕೆಲಸಕ್ಕೆ ಮೇಲಧಿಕಾರಿಗಳ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.