ಕರ್ನಾಟಕ

karnataka

ಬೆಂಗಳೂರಲ್ಲಿ ನಿರ್ಗತಿಕರಿಗೆ ನೆರಳಾಗುತ್ತಿದೆ ಸ್ಕೌಟ್ಸ್​​​​ & ಗೈಡ್ಸ್​​ ತಂಡ

By

Published : Apr 26, 2020, 10:49 AM IST

Published : Apr 26, 2020, 10:49 AM IST

ಬೆಂಗಳೂರು: ಕೊರೊನಾ ತಡೆಗೆ ಲಾಕ್​ಡೌನ್ ಪಾಲನೆ​ ಜೊತೆಗೆ ಮಾಸ್ಕ್​, ಸ್ಯಾನಿಟೈಜರ್​ ಕೂಡಾ ಅತ್ಯಗತ್ಯ. ಆದ್ರೆ ಕಡು ಬಡವರಿಗೆ, ನಿರ್ಗತಿಕರಿಗೆ ಒಂದೊತ್ತಿನ ಊಟಕ್ಕೂ ಕಷ್ಟಪಡುವಂತಹ ಈ ಸ್ಥಿತಿಯಲ್ಲಿ ಇತರೆ ಮುಂಜಾಗ್ರತಾ ಕ್ರಮಕ್ಕೆ ಹಣ ಖರ್ಚು ಮಾಡುವುದು ದೂರದ ವಿಷಯ. ಹಾಗಾಗಿ, ನಗರದಲ್ಲಿ ಹಿಂದೂಸ್ಥಾನ್ ಸ್ಕೌಟ್ಸ್​​ & ಗೈಡ್ಸ್​​ನ ಸುಮಾರು ನೂರಕ್ಕೂ ಹೆಚ್ಚು ತಂಡ ಕಡುಬಡತನದಲ್ಲಿರುವವರನ್ನ ಆಯ್ಕೆ‌ಮಾಡಿ ತಾವೇ ಮನೆಯಲ್ಲಿ ತಯಾರಿಸಿದ ಮಾಸ್ಕ್​​ಗಳನ್ನು ಸ್ಥಳಕ್ಕೆ ತೆರಳಿ ನೀಡುತ್ತಿದ್ದಾರೆ. ಮಾಸ್ಕ್​​ ಮಾತ್ರವಲ್ಲದೇ ನಿರ್ಗತಿಕರಿಗೆ, ಪ್ರಾಣಿಗಳಿಗೆ ಆಹಾರದ ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ. ಈ ತಂಡ ಬಟ್ಟೆಗಳ ಮಾಸ್ಕ್ ತಯಾರಿಸುತ್ತಿದ್ದು, ದಿನಕ್ಕೆ 500ಕ್ಕೂ ಹೆಚ್ಚು ಮಾಸ್ಕ್​ಗಳು ಸಿದ್ಧವಾಗ್ತಿವೆ.​ ಈ ಕುರಿತು ಈಟಿವಿ ಭಾರತನೊಂದಿಗೆ ಸ್ಕೌಟ್ಸ್​​ ಆ್ಯಂಡ್​ ಗೈಡ್ಸ್​​ ತಂಡದ ಸದಸ್ಯರು ಮಾಹಿತಿ ಹಂಚಿಕೊಂಡಿದಗ್ದಾರೆ.

ABOUT THE AUTHOR

...view details