ಸಾಂಸ್ಕೃತಿಕ ನಗರಿಯಲ್ಲಿ ಆದಿವಾಸಿಗಳ ನೃತ್ಯ... ಹಕ್ಕೊತ್ತಾಯಕ್ಕಾಗಿ ಮೆರವಣಿಗೆ - mysore news
ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಆದಿವಾಸಿಗಳು ನೃತ್ಯದ ಮೂಲಕ ಗಮನ ಸೆಳೆದರು. ಆದಿವಾಸಿ ಸಮನ್ವಯ ಮಂಚ್ ಭಾರತ ಹಾಗೂ ರಾಜ್ಯ ಮೂಲ ಆದಿವಾಸಿ ವೇದಿಕೆ ಕರ್ನಾಟಕ ವತಿಯಿಂದ ಜಂಟಿಯಾಗಿ ಮೆರವಣಿಗೆ ಆಯೋಜಿಸಲಾಗಿತ್ತು. ಇದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಬುಡಕಟ್ಟು ಜನರೊಂದಿಗೆ, ತಮಿಳುನಾಡು, ಕೇರಳ, ಜಾರ್ಖಂಡ್, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಆದಿವಾಸಿಗಳು ಹಕ್ಕೊತ್ತಾಯಕ್ಕಾಗಿ ಮೆರವಣಿಗೆ ನಡೆಸಿದ್ರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಲಿಗ ಮುಖಂಡ ಡಾ. ಸಿ. ಮಾದೇಗೌಡ, ಹಕ್ಕೊತ್ತಾಯಕ್ಕಾಗಿ ಬೃಹತ್ ಮೆರವಣಿಗೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.