ಬಜೆಟ್ನಲ್ಲಿ ಚಿಕ್ಕೋಡಿಯ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಾರ್ವಜನಿಕರ ಮನವಿ - ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ
ಚಿಕ್ಕೋಡಿ: ಮಾರ್ಚ್ 5ರಂದು 2020-21ರ ಆಯವ್ಯಯವನ್ನು ಸಿಎಂ ಯಡಿಯೂರಪ್ಪ ಮಂಡನೆ ಮಾಡಲಿದ್ದು, ಬಜೆಟ್ನಲ್ಲಿ ಚಿಕ್ಕೋಡಿ ಉಪ ವಿಭಾಗದ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ. ಈ ಭಾಗದಲ್ಲಿ ಯಾವುದೇ ಸರ್ಕಾರಿ ವೈದ್ಯಕೀಯ ಕಾಲೇಜು, ಸ್ನಾತಕೋತ್ತರ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಇಲ್ಲದೇ ಇರುವುದರಿಂದ ಈ ಭಾಗದ ವಿದ್ಯಾರ್ಥಿಗಳು ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು ನಗರಗಳಿಗೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯುವಂತಹ ಪ್ರಸಂಗ ಎದುರಾಗಿದೆ. ಅಲ್ಲದೇ ಇಲ್ಲಿ ಅಂಧ ಮಕ್ಕಳ ಶಾಲೆ ಇದ್ದು, ಅದಕ್ಕೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಹಾಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಈಟಿವಿ ಭಾರತ ಜೊತೆ ಶಿಕ್ಷಣ ಪ್ರೇಮಿ ಬಾಹುಬಲಿ ಟೋಪಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.