ಮರಾಠ ಪ್ರಾಧಿಕಾರ ರಚನೆ ನಿರ್ಧಾರ ಬೈ ಎಲೆಕ್ಷನ್ ಗಿಮಿಕ್ ಅಲ್ಲ: ಶಾಸಕ ಅನಿಲ್ ಬೆನಕೆ - ಶಾಸಕ ಅನಿಲ್ ಬೆನಕೆ ಸುದ್ದಿ
ಬೆಳಗಾವಿ: ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಕಳೆದ ಮೂರು ದಶಕಗಳಿಂದ ಪಕ್ಷಾತೀತ ಬೇಡಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದಾರೆ. ಮರಾಠ ಸಮಾಜ ಸಿಎಂ ನಿರ್ಧಾರ ಸ್ವಾಗತಿಸುವ ಜತೆಗೆ ಅವರನ್ನು ಅಭಿನಂದಿಸುತ್ತದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಹೇಳಿದ್ದಾರೆ. ಬೆಳಗಾವಿಯಲ್ಲಿ ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಬೇಡಿಕೆ ಇತ್ತು. ಎಲ್ಲ ಪಕ್ಷಗಳ ಮುಖಂಡರು ಎಲ್ಲ ಸರ್ಕಾರಗಳ ಮುಂದೆ ಈ ಸಂಬಂಧ ಬೇಡಿಕೆ ಇಡುತ್ತಿದ್ದರು. ಅಂದು ಬೇಡಿಕೆ ಇಟ್ಟವರೇ ಇಂದು ವಿರೋಧ ಮಾಡುತ್ತಿದ್ದಾರೆ ಎಂದು ದೂರಿದರು. ಮರಾಠ ಪ್ರಾಧಿಕಾರ ರಚನೆ ಉಪಚುನಾವಣೆ ಗಿಮಿಕ್ ಅಲ್ಲ. ಆ ರೀತಿಯ ಸಂದರ್ಭ ಈಗ ಬಂದಿದೆಯಷ್ಟೆ. ಬಹುದಿನದ ಬೇಡಿಕೆಗೆ ಸಿಎಂ ಸ್ಪಂದಿಸಿದ್ದಾರೆ ಎಂದರು.