ಕೊಡಗಿನಲ್ಲಿ ವರುಣನ ಅಬ್ಬರ: ಕಣ್ಣೆದುರೇ ಧರೆಗುರುಳಿತು ಮನೆ! - ಕಾವೇರಿ ನದಿ
ಕೊಡಗು: ಕಳೆದ ವರ್ಷ ವರುಣನ ಅವಾಂತರದಿಂದ ನಲುಗಿದ್ದ ಕೊಡಗಿನಲ್ಲಿ ಮತ್ತೆ ಮಳೆ ರುದ್ರನರ್ತನ ಆರಂಭಿಸಿದೆ. ಜನರು ಜೀವ ಕೈಯಲ್ಲಿಡಿದು ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ನೋಡ, ನೋಡುತ್ತಿದ್ದಂತೆ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಕಾವೇರಿ ನದಿ ತೀರ ಪ್ರದೇಶದ ಬಲಮುರಿಯಲ್ಲಿ ನಡೆದಿದೆ.