ಉಕ್ಕಿ ಹರಿದ ಮಾಂಜ್ರಾ ನದಿ: ಬಣವೆ ಸಹಿತ ಕೊಚ್ಚಿ ಹೋದ ಸೋಯಾ ಬೆಳೆ - ಸೋಯಾ ಬಣವೆ
ಬಸವಕಲ್ಯಾಣ: ಹುಲಸೂರ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮಾಂಜ್ರಾ ನದಿ ತುಂಬಿ ಹರಿದ ರೈತರು ಬೆಳೆದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಮಹಾರಾಷ್ಟ್ರದಿಂದ ಗಡಿ ತಾಲೂಕು ಹುಲಸೂರ ಮಾರ್ಗವಾಗಿ ಹರಿಯುವ ಮಾಂಜ್ರಾ ನದಿಗೆ ಅಪಾರ ಪ್ರಮಾಣದ ನೀರು ಬಂದಿದ್ದು, ಸೋಯಾ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣವಾಗಿ ನೀರು ಪಾಲಾಗಿವೆ. ಸೋಯಾ ಬಣವೆ ಕೂಡ ನೀರಿನಲ್ಲಿ ತೇಲಿ ಹೋಯಿತು. ಈ ಮೂಲಕ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.