'ಕಲ್ಪತರು' ನಾಡಲ್ಲಿ ಮಾವು ಮೇಳ: ಪಾಲಿಕೆಯಿಂದ ರೈತರಿಗೆ ನೆರವು - 'ಕಲ್ಪತರು' ನಾಡಲ್ಲಿ ಮಾವು ಮೇಳ
ತುಮಕೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆ ಇಲ್ಲದೆ ಕಂಗಾಲಾಗಿದ್ದ ಜಿಲ್ಲೆಯ ಮಾವು ಬೆಳೆಗಾರರಿಗೆ ತೋಟಗಾರಿಕಾ ಇಲಾಖೆ ಮಾರುಕಟ್ಟೆ ಒದಗಿಸಿಕೊಟ್ಟಿದೆ. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿ ಮಾವು ಮಾರಾಟಕ್ಕೆ ಇಲಾಖೆ ವತಿಯಿಂದ ಸ್ಟಾಲ್ಗಳನ್ನು ಹಾಕಿ ಕೊಡಲಾಗಿದೆ. ಕಲ್ಪತರು ಮಾವು ಎಂಬ ಬ್ರಾಂಡ್ನಲ್ಲಿ ಮಾರಾಟ ಮಾಡಲಾಗುತ್ತಿದೆ.