ಮಾರುಕಟ್ಟೆಗೆ ಲಗ್ಗೆ ಇಟ್ಟ ಹಣ್ಣುಗಳ ರಾಜ... ಆರಂಭದಲ್ಲೇ ಬಿತ್ತು ಗ್ರಾಹಕರ ಜೇಬಿಗೆ ಕತ್ತರಿ! - Bangalore
ಹಣ್ಣುಗಳ ರಾಜ ಮಾವಿನ ಹಣ್ಣು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬಾಯಲ್ಲಿ ನೀರೂರಿಸುವ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿದ್ದು, ಇವುಗಳನ್ನು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಬಿರುಬಿಸಿಲಿನಿಂದ ಬೇಸತ್ತಿರುವ ಜನರಿಗೆ ಮಾವಿನ ಹಣ್ಣುಗಳು ಇದೀಗ ತಂಪು ನೀಡುತ್ತಿವೆ. ರಸ್ಪುರಿ, ಮಲ್ಲಿಕಾ, ಬಾದಾಮಿ, ಕೇಸರಿ, ಸಿಂಧೂರ, ಆಫೂಸ ಸೇರಿದಂತೆ ಹಲವು ಬಗೆಯ ತಳಿಗಳ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇವುಗಳ ಬೆಲೆ ಕೇಳಿದರೆ ಮಾತ್ರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ ಎನ್ನುತ್ತಾರೆ ಗ್ರಾಹಕರು. ಇನ್ನು ಮಾವು ಖರೀದಿಸುವ ಮುನ್ನ ನೈಸರ್ಗಿಕವಾಗಿ ಹಣ್ಣಾದ ಮಾವನ್ನು ಮಾತ್ರ ಕೊಳ್ಳುವಂತೆ ಗ್ರಾಹಕರು ಎಚ್ಚರ ವಹಿಸಬೇಕಿದೆ.
Last Updated : Apr 27, 2019, 12:04 AM IST