ಲಾಕ್‌ಡೌನ್: ಇಂದು ಮಂಗಳೂರು ಹೇಗಿದೆ? ಈಟಿವಿ ಭಾರತ ಪ್ರತ್ಯಕ್ಷ್ಯ ವರದಿ!
ಮಂಗಳೂರು : ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದಾದ್ಯಂತ ಲಾಕ್ ಡೌನ್ ಇದ್ದು ಮಂಗಳೂರಿನಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಬೆಳಿಗ್ಗೆ 7 ರಿಂದ 12 ಗಂಟೆ ವರೆಗೆ ದಿನಸಿ ವ್ಯವಹಾರ ನಡೆಯಲಿದ್ದು ಬಳಿಕ ಸಂಪೂರ್ಣ ಸ್ಥಬ್ಧವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ಗೆ ಜನರು ಉತ್ತಮ ಸ್ಪಂದನೆ ನೀಡಿದ್ದಾರೆ.