ಮಂಡ್ಯದಲ್ಲಿ ಕೋವಿಡ್ ಲಸಿಕೆ ಡ್ರೈ ರನ್ಗೆ ಸಕಲ ಸಿದ್ದತೆ - ದೇಶದಾದ್ಯಂತ ಕೋವಿಡ್ ಲಸಿಕೆ ಡ್ರೈ ರನ್
ಮಂಡ್ಯ: ನಾಳೆ ಕೋವಿಡ್ ಲಸಿಕೆ ಡ್ರೈ ರನ್ಗೆ ಮಂಡ್ಯದ ಮಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಜಿಲ್ಲೆಯ 7 ಕಡೆ ನಾಳೆ ಡ್ರೈರನ್ ನಡೆಯಲಿದೆ. ಮಿಮ್ಸ್ ಆಸ್ಪತ್ರೆಯಲ್ಲಿ ಮೂರು ಕೊಠಡಿಗಳಲ್ಲಿ ಲಸಿಕೆ ವಿತರಣೆ ನಡೆಯಲಿದ್ದು, ಲಸಿಕೆ ಪಡೆಯಲಿರುವ ಸ್ವಯಂ ಸೇವಕರನ್ನು ಪರಿಶೀಲಿಸಿ ಕೊಠಡಿಯೊಳಗೆ ಬಿಡಲಾಗುತ್ತದೆ. ಲಸಿಕೆ ಪಡೆದ ಬಳಿಕ ಏನಾದರು ವ್ಯತಿರಿಕ್ತ ಪರಿಣಾಮ ಬೀರಿದರೆ ತಕ್ಷಣ ಚಿಕಿತ್ಸೆ ನೀಡಲೂ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಿಮ್ಸ್ ನಿರ್ದೇಶಕ ಹರೀಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.