ಧರ್ಮೇಗೌಡರ ಸಾವಿನ ಸುದ್ದಿ ಮನಸ್ಸಿಗೆ ಅಘಾತವನ್ನುಂಟು ಮಾಡಿದೆ: ಮಾನ್ವಿ ಜೆಡಿಎಸ್ ಶಾಸಕ - ಎಸ್.ಎಲ್.ಧರ್ಮೇಗೌಡ ನಿಧನ
ರಾಯಚೂರು: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಸಾವಿನ ಸುದ್ದಿ ಮನಸ್ಸಿಗೆ ಅಘಾತವನ್ನುಂಟು ಮಾಡಿದೆ. ಧರ್ಮೇಗೌಡರು ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಹತ್ತಿರದ ಒಡನಾಡಿ ಆಗಿದ್ದರು. ಜೊತೆಗೆ ನಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇಂದು ಅವರ ನಿಧನದ ಸುದ್ದಿ ಮನಸ್ಸಿಗೆ ನೋವುಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ದೊರಕಿಸಲಿ ಮತ್ತು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಮಾನ್ವಿ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಸಂತಾಪ ಸೂಚಿಸಿದ್ದಾರೆ.