ಮರದ ಕೆಳಗೆ ನಿಂತಾಗ ಬಡಿದ ಸಿಡಿಲು... ಓರ್ವ ಸಾವು, 16 ಮಂದಿಗೆ ಗಾಯ - ಕೋಲ್ಕಾತ್ತದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು; 16 ಜನರಿಗೆ ಗಾಯ
ಕೋಲ್ಕಾತ್ತದ ವಿಕ್ಟೋರಿಯಾ ಮೊಮೋರಿಯಲ್ ಬಳಿ ಶುಕ್ರವಾರ ಸಿಡಿಲು ಬಡಿದು ವ್ಯಕ್ತಿವೋರ್ವರು ಮೃತಪಟ್ಟಿದ್ದಾರೆ. ಇನ್ನುಳಿದಂತೆ 16 ಜನ ಗಾಯಗೊಂಡಿದ್ದು, ಹತ್ತಿರದ ಎಸ್.ಎಸ್.ಕೆ.ಎಂ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶುಕ್ರವಾರ ಕೋಲ್ಕಾತ್ತದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ವೇಳೆ ವಿಕ್ಟೋರಿಯಾ ಮೊಮೋರಿಯಲ್ ಬಳಿ ಇದ್ದ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಅವಘಡ ಸಂಭವಿಸಿದೆ. ಮೃತ ವ್ಯಕ್ತಿಯ ಪತ್ನಿ ಹಾಗೂ ಪುತ್ರಿ ಗಾಯಗೊಂಡಿದ್ದಾರೆ.