ಕೊರೊನಾ ಹೊರತಾದ ಸಮಸ್ಯೆಗಳಿಗೂ ಸ್ಪಂದನೆ: ಮಾಳವಿಕಾ ಅವಿನಾಶ್ ಕಳಕಳಿ - Malavika avinash latest news
ಕೊವಿಡ್ಡೇತರ ಸಮಸ್ಯೆಗಳಾದ ಆಹಾರ ಸಮಸ್ಯೆ , ಬೇರೆ-ಬೇರೆ ಚಿಕಿತ್ಸೆಗೆ ಸ್ಪಂದಿಸುವುದಕ್ಕಾಗಿ ರಾಜ್ಯ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಟಾಸ್ಕ್ ಫೋರ್ಸ್ ರಚನೆ ಮಾಡಿದೆ. ಈಟಿವಿ ಭಾರತ ಜೊತೆ ಟಾಸ್ಕ್ ಫೋರ್ಸ್ ಸದಸ್ಯೆ ಮಾಳವಿಕಾ ಅವಿನಾಶ್ ಮಾತನಾಡಿ, ಮುಖ್ಯಮಂತ್ರಿಗಳ ಪ್ರಮುಖ ಸೂಚನೆ ಅಂದ್ರೆ ಯಾರೂ ಸಹ ಹಸಿವಿನಿಂದ ಇರಬಾರದು, ರಾಜ್ಯವನ್ನ ಹಸಿವು ಮುಕ್ತಗೊಳಿಸಬೇಕೆಂಬುದು. ವಲಸೆ ಬಂದವರು, ಕಟ್ಟಡ ಕಾರ್ಮಿಕರ ಬಗ್ಗೆ , ನೆಲೆ ಇಲ್ಲದೇ ಊಟದ ತೊಂದರೆ ಇರುವವರನ್ನ ನಾವು ಹುಡುಕಿ ಸಹಾಯ ಮಾಡುತ್ತಿದ್ದೇವೆ. ತಂಡದಲ್ಲಿ ಹತ್ತು ಸಾವಿರ ಜನ ಇದ್ದು ಸ್ವಯಂ ಸೇವಕರು, ಶೌರ್ಯಚಕ್ರ ಪಡೆದವರು, ಸಿವಿಲ್ ಡಿಫೆನ್ಸ್ ಪೊಲೀಸರು ಇದ್ದಾರೆ. ಲಾಕ್ಡೌನ್ ಮುಂದುವರೆದಿದ್ದು, ಪ್ರಧಾನಿ ಮೋದಿ ಮಾತನ್ನ ಪ್ರತಿಯೊಬ್ಬರು ಆಲಿಸಬೇಕು. ಮುಂದೆ ಸ್ವಲ್ಪ ಕಷ್ಟ ಆಗಬಹುದು. ಆದರೆ, ಎಲ್ಲರೂ ಮನೆಯಲ್ಲಿಯೇ ಇರಿ. ಬಡ ಜನರಿಗೆ ತೊಂದರೆಯಾದರೆ ನಾವಿದ್ದೇವೆ ಎಂದು ಭರವಸೆ ನೀಡಿದರು.