ನಿಲ್ಲದ ಮಲಪ್ರಭೆ ಆರ್ಭಟ: ಅಚ್ಚುಕಟ್ಟು ಪ್ರದೇಶದ ಹೊಲಗಳು ಜಲಾವೃತ - ಬಾದಾಮಿ ಸಂಪರ್ಕ ಸೇತುವೆ
ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಬಳಿಯ ಬಾದಾಮಿ ಸಂಪರ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ದಾಟಲಾಗದೇ ಪ್ರಯಾಣಿಕರು, ಬೈಕ್ ಸವಾರರು ಪರದಾಡುತ್ತಿದ್ದಾರೆ. ನವಿಲುತೀರ್ಥ ಡ್ಯಾಂನಿಂದ ಅಪಾರ ನೀರು ಬಿಡುಗಡೆಯಾಗಿದೆ. ಮಲಪ್ರಭಾ ನದಿಯ ಆಸುಪಾಸಿನ ಹೊಲಗಳಲ್ಲಿ ನೀರು ನುಗ್ಗಿ, ಬೆಳೆ ಹಾನಿಯಾಗಿದೆ.