ಮಲಪ್ರಭಾ ಬಲದಂಡೆ ಕಾಲುವೆಯೊಳಗೆ ಸಂಕ್ರಾಂತಿ ಹಬ್ಬ ಬಲು ಜೋರು.. - Makara sankranthi celebration
ಧಾರವಾಡ: ಮಕರ ಸಂಕ್ರಾಂತಿಯ ಪ್ರಯುಕ್ತ ಜಿಲ್ಲೆಯ ಜನ ನೀರಸಾಗರ ಕೆರೆ, ಸೋಮೇಶ್ವರ ದೇವಸ್ಥಾನ ಸೇರಿ ಹಲವೆಡೆ ಪುಣ್ಯಸ್ನಾನ ಮಾಡಿ ಹಬ್ಬ ಆಚರಿಸಿದರು. ಮಲಪ್ರಭಾ ಬಲದಂಡೆ ಕಾಲುವೆಯ ನೀರಿನಲ್ಲಿ ಜನ ಸ್ನಾನ ಮಾಡಿ, ಅಲ್ಲಿಯೇ ಹಬ್ಬದ ಅಡುಗೆ ತಯಾರಿಸಿದರು. ಕುಟುಂಬದವರೊಂದಿಗೆ ಊಟ ಮಾಡಿ ಹಬ್ಬವನ್ನ ವಿಶೇಷವಾಗಿ ಆಚರಿಸಿದರು.