ರಾಸುಗಳನ್ನು ಸಿಂಗರಿಸುವ ಮೂಲಕ ಕೋಲಾರದಲ್ಲಿ ಸಂಕ್ರಾಂತಿ ಆಚರಣೆ - Makar Sankranti celebration,
ಇಂದು ಕೋಲಾರದಲ್ಲಿ ಸಂಕ್ರಾತಿ ಹಬ್ಬವನ್ನು ರಾಸುಗಳನ್ನು ಸಿಂಗರಿಸುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಿದರು. ಹಬ್ಬದ ಹಿನ್ನೆಲೆಯಲ್ಲಿ ಮುಳಬಾಗಿಲು ಪಟ್ಟಣದ ಮುತ್ಯಾಲಪೇಟೆಯ ಈಶ್ವರ ದೇವಾಲಯದ ಬಳಿ ಹಮ್ಮಿಕೊಳ್ಳಲಾಗಿದ್ದ ರಾಸುಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಚಾಲನೆ ನೀಡಿದರು. ರಾಸುಗಳನ್ನು ಬಗೆಬಗೆ ಹೂಗಳಿಂದ ಸಿಂಗರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಅಲ್ಲದೇ ಚೆನ್ನಾಗಿ ಸಿಂಗಾರಗೊಂಡಂತಹ ರಾಸುಗಳಿಗೆ ಸಚಿವರು ಬಹುಮಾನ ವಿತರಣೆ ಮಾಡಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲಾ ರಾಸುಗಳಿಗೂ ಸಮಾಧಾನಕರ ಬಹುಮಾನವನ್ನು ವಿತರಿಸಲಾಯಿತು.