ಅಕಾಲಿಕ ಮಳೆ : ಕೊಚ್ಚಿ ಹೋದ ಮೆಕ್ಕೆಜೋಳ ಬೆಳೆ - ಕೊಚ್ಚಿ ಹೋದ ಮೇಕ್ಕೆಜೋಳ ಬೆಳೆ
ಚಿತ್ರದುರ್ಗ: ತಡರಾತ್ರಿ ಸುರಿದ ಅಕಾಲಿಕ ಮಳೆಗೆ ಮೆಕ್ಕೆಜೋಳದ ಬೆಳೆ ಕೊಚ್ಚಿ ಹೋದ ಘಟನೆ ಚಿತ್ರದುರ್ಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆದಿದೆ. ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಅಳಗವಾಡಿ ಗ್ರಾಮದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತ ರಾಜಪ್ಪ ಹಾಗೂ ತಿಪ್ಪೇಸ್ವಾಮಿ ಎಂಬ ರೈತರ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ 1.50 ಲಕ್ಷ ಮೌಲ್ಯದ ಮೆಕ್ಕೆಜೋಳ ಬೆಳೆ ಕೊಚ್ಚಿ ಹೋಗಿದೆ.