ದೇಶ ಸ್ವಚ್ಛಂದ ಪರಿಸರ ನೀಡಿದೆ, ಕಾಪಾಡಿಕೊಂಡು ಹೋಗುವುದೇ ದೇಶಕ್ಕೆ ನೀಡುವ ಕೊಡುಗೆ : ತುಮಕೂರು ಜನರ ಪ್ರತಿಕ್ರಿಯೆ
ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾಗಿದೆ ಈ ಸುದೀರ್ಘಾವಧಿಯಲ್ಲಿ 'ದೇಶ ನನಗೇನು ನೀಡಿತು' ಮತ್ತು 'ನಾನು ದೇಶಕ್ಕೆ ಏನು ನೀಡಿದೆ' ಎಂಬ ಕುರಿತು ದೇಶಾಭಿಮಾನಿಗಳಿಂದ ವಿಭಿನ್ನವಾದ ಪ್ರತಿಕ್ರಿಯೆಗಳು ಮೂಡಿಬಂದಿವೆ. ದೇಶ ನಮಗೆ ಸ್ವಚ್ಛಂದ ಪರಿಸರವನ್ನು ನೀಡಿದೆ ಸ್ವಚ್ಛಂದ ಪರಿಸರವನ್ನು ಕಾಪಾಡಿಕೊಂಡು ಹೋಗುವುದೇ ನಾವು ದೇಶಕ್ಕೆ ಕೊಡುವಂತಹ ಬಹುದೊಡ್ಡ ಕೊಡುಗೆಯಾಗಿದೆ ಎಂದು ತುಮಕೂರು ಜನರು ತಮ್ಮ ಅಭಿಪ್ರಾಯ ಹಂಚಿಕೊಂಡರು.