ಡಿಸಿಎಂ ಲಕ್ಷ್ಮಣ ಸವದಿ ಅವಾಚ್ಯ ಶಬ್ದ ಬಳಕೆಗೆ ಮಹೇಶ್ ಕುಮಟಳ್ಳಿ ಹೇಳಿದ್ದೇನು? - Laxman Savadi statement news
ಅವಾಚ್ಯ ಶಬ್ದದಿಂದ ಡಿಸಿಎಂ ಲಕ್ಷ್ಮಣ ಸವದಿ ನಿಂದಿಸಿದ ಕುರಿತು ಪ್ರತಿಕ್ರಿಯಿಸಿದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ, ನಾನು ಕೂಡ ಜನರ ಮದ್ಯೆ ಇದ್ದು ಕೆಲಸ ಮಾಡಿದ್ದೇನೆ. ಲಕ್ಷ್ಮಣ ಸವದಿ ಅವರು ಯಾಕೆ ಹೀಗೆ ಮಾತನಾಡಿದರು ಅನ್ನೋದು ತಿಳಿದಿಲ್ಲ. ಅವರ ಮಾತಿನಿಂದ ನನಗೂ ತೀವ್ರ ನೋವಾಗಿದೆ. ವಿಷ ಕೊಟ್ಟರೂ ಅಮೃತವಾಗಲಿ ಎಂದು ಬಯಸುವ ನಾನು, ಅವರಿಗೂ ಒಳ್ಳೆಯದಾಗಲಿ ಅಂತ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.