ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಮಹಾತ್ಮನ ಹೆಜ್ಜೆ ಗುರುತುಗಳು... - ತುಮಕೂರು ಗಾಂಧೀಜಿ ಭವನ
ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿನ ಮಹಾತ್ಮ ಗಾಂಧೀಜಿಯವರ ಹೆಜ್ಜೆಗುರುತುಗಳು ತುಮಕೂರಿಗರ ಮನದಲ್ಲಿ ಮಾಸುವುದಿಲ್ಲ. 1927 ರಲ್ಲಿ ತುಮಕೂರು ನಗರಕ್ಕೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ ಅವರು ಇಲ್ಲಿನ ಶಾಲಾ ಕೊಠಡಿಯೊಂದರಲ್ಲಿ ತಂಗಿದ್ದರು. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಮಹತ್ವದ ಸಭೆಯನ್ನು ನಡೆಸಿದ ಶಾಲಾ ಕೊಠಡಿಯನ್ನು ಜಿಲ್ಲಾಡಳಿತ ಸಂರಕ್ಷಣೆ ಮಾಡಿ, ಮಹಾತ್ಮಗಾಂಧೀಜಿ ಸ್ಮಾರಕ ಭವನ ಎಂದು ಗುರುತಿಸಿದೆ.