ಮಹಾಶಿವರಾತ್ರಿ ಸಂಭ್ರಮ: ಹಣ್ಣಿನಲ್ಲಿ ಮೂಡಿದ ಶಿವಲಿಂಗ - Mahashivaratri celebration
ಧಾರವಾಡ: ಮಹಾಶಿವರಾತ್ರಿ ಅಂಗವಾಗಿ ಧಾರವಾಡದ ಯುವ ಕಲಾವಿದರಿಬ್ಬರು ವಿವಿಧ ಹಣ್ಣುಗಳಲ್ಲಿ ಶಿವಲಿಂಗದ ಕಲಾಕೃತಿ ರಚನೆ ಮಾಡಿ ಭಕ್ತಿ ಮೆರೆದಿದ್ದಾರೆ. ಧಾರವಾಡದ ಕೆಲಗೇರಿಯ ಗಾಯತ್ರಿಪುರದ ಯುವ ಕಲಾವಿದರಾದ ವಿನಾಯಕ ಹಿರೇಮಠ ಹಾಗೂ ಕಾಂತೇಶ ಹಿರೇಮಠ ಕರಬೂಜ, ಕಪ್ಪು ದ್ರಾಕ್ಷಿ ಹಾಗೂ ಸೇಬು ಹಣ್ಣುಗಳನ್ನು ಬಳಸಿಕೊಂಡು ಶಿವಲಿಂಗ ರಚಿಸಿ ಶಿವರಾತ್ರಿಯ ಶುಭಾಶಯ ಕೋರಿದ್ದಾರೆ.