ರಾಯಚೂರಿನಲ್ಲಿ ಮಹಾಶಿವರಾತ್ರಿ ಸಂಭ್ರಮ: ಶಿವನಾಮ ಸ್ಮರಣೆಯಲ್ಲಿ ಭಕ್ತರು - ಶಿವನಾಮ ಸ್ಮರಣೆ
ರಾಯಚೂರು: ಜಿಲ್ಲಾದ್ಯಂತ ಸಂಭ್ರಮ - ಸಡಗರದಿಂದ ಶಿವರಾತ್ರಿ ಹಬ್ಬವನ್ನ ಆಚರಿಸಲಾಗುತ್ತಿದೆ. ನಗರದ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬ ಹಿನ್ನೆಲೆಯಲ್ಲಿ ಬೆಳಗ್ಗೆ ರುದ್ರಾಭಿಷೇಕ, ಮಹಾಪೂಜೆ, ಎಲೆ ಪೂಜೆ, ಮಹಾಮಂಗಳಾರಾತಿ ಸೇರಿದಂತೆ ನಾನಾ ವಿಶೇಷ ಪೂಜೆಗಳು ನೆರವೇರಿಸಲಾಗುತ್ತಿದ್ದು, ದೇಗುಲವನ್ನ ಹೂಗಳಿಂದ ವಿಶೇಷವಾಗಿ ಸಿಂಗರಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಶಿವನ ಭಕ್ತರು ಶಿವನಾಮ ಸ್ಮರಣೆ ಮಾಡುವ ಮೂಲಕ ಭಕ್ತಿ-ಭಾವದಿಂದ ಶಿವರಾತ್ರಿ ಆಚರಣೆ ಮಾಡಲಾಗುತ್ತಿದೆ.