ದೇಶದ ಪ್ರಗತಿಗೆ ಧನಾತ್ಮಕ ಬಜೆಟ್; ತೆರಿಗೆ ರಿಯಾಯಿತಿ ಸ್ವಾಗತಾರ್ಹ
ಬೆಳಗಾವಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ದೇಶದ ಪ್ರಗತಿಗೆ ಧನಾತ್ಮಕವಾಗಿದೆ. ತೆರಿಗೆ ರಿಯಾಯಿತಿಯಿಂದ ಸರ್ವರಿಗೂ ಅನುಕೂಲ ಆಗಲಿದ್ದು, ಈ ಕ್ರಮವನ್ನು ಸ್ವಾಗತಿಸುತ್ತೇವೆ. ಉದ್ಯಮ ಸ್ಥಾಪಿಸುವ ಯುವಕರಿಗೆ ಈ ಬಜೆಟ್ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಮೊದಲ ಐದು ವರ್ಷ ಅಡಿಟ್ ಮಾಡಿಸುವ ಹಾಗಿಲ್ಲ ಹಾಗೂ ಹೊಸ ಉದ್ಯಮ ಸ್ಥಾಪಿಸುವ ಯುವಕರಿಗೆ 1 ಕೋಟಿ ರೂ, ಅಧಿಕ ಸಾಲದ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ ಎಂದು ಹೋರಾಟಗಾರ ಮಹಾಂತೇಶ ಒಕ್ಕುಂದ ಪ್ರತಿಕ್ರಿಯೆ ನೀಡಿದರು.