ಮಹಾನವಮಿ ಅಮಾವಾಸ್ಯೆ: ಲಿಂಗಸುಗೂರಿನ ರಾಮತ್ನಾಳ ಗ್ರಾಮದಲ್ಲಿ ವಾಮಾಚಾರ ಶಂಕೆ - ವಾಮಾಚಾರ
ಮಹಾನವಮಿ ಅಮಾವಾಸ್ಯೆ ಹಿನ್ನೆಲೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರಾಮತ್ನಾಳ ಗ್ರಾಮದ ಹೊರವಲಯದ ಕಂದಗಲ್ ರಸ್ತೆ ಬಳಿ ವಾಮಾಚಾರ ಮಾಡಲಾಗಿದೆ ಎಂದು ಹೇಳಲಾಗಿದೆ. ಕುಂಕಮ, ಅರಿಶಿಣ, ತೆಂಗಿನಕಾಯಿ, ಮಡಿಕೆ, ನೈವೇದ್ಯಕ್ಕಾಗಿ ಅನ್ನ, ಹೋಳಿಗೆ, ಸೇರಿದಂತೆ ಪೂಜೆ ಸಾಮಾಗ್ರಿಗಳನ್ನ ಬಳಿಸಿಕೊಂಡು ತಡರಾತ್ರಿ ವಾಮಾಚಾರ ಮಾಡಿದ್ದಾರೆ ಎಂದು ಕೆಲವರು, ಇನ್ನೂ ಕೆಲವರು ಅಮಾವಾಸ್ಯೆ ಪೂಜೆ ಮಾಡಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ವಾಮಾಚಾರಕ್ಕೆ ಬಳಸಿದ ಆಹಾರ, ಪೂಜೆ ಸಾಮಾಗ್ರಿಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವುದನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ.